ರಾಗ: (ಶಿವಪ್ಪ ಕಾಯೊ ತಂದೆ ) ತಾಳ: (ಆದಿ ತಾಳ)
ಎಲೆಕ್ಟ್ರಿಕಲ್ ವಿದ್ಯಾರ್ಥಿ – ಥೇರಾಜಪ್ಪ ಕಾಯೋ ದೇವಾ
ನಮಗೆಲ್ಲಾ ಸ್ವಾಮಿ ನೀನು
ನೋಟ್ಸ್‍ನ್ನು ಓದಲಾರೆ ಕಾಪಾಡಯಾ ! ಥೇರಾಜಪ್ಪ
ಮೋಟರಂತೆ, ಸ್ಟಾರ್ಟರಂತೆ ಒಂದೂ ಅರಿಯೆನಾ
ವೋಲ್ಟೇಜಂತೆ, ಕರೆಂಟಂತೆ, ಕಾಣೆನಯ್ಯಾ ನಾ
ಕ್ಲಾಸಿನಲ್ಲಿ ಕೂರಲಾರೆ ಕಾಪಾಡಯ್ಯ ! ಥೇರಾಜಪ್ಪ
ಮೆಕ್ಯಾನಿಕಲ್ ವಿದ್ಯಾರ್ಥಿ – ಲೆವಿಟ್ಟಪ್ಪ ಕಾಯೋ ದೇವಾ
ಲೆಕ್ಚರಿರ್ಗೆಲ್ಲಾ ಒಡೆಯ ನೀನು
ನೋಟ್ಸ್‍ನ್ನು ಬರೆಯಲಾರೆ ಕಾಪಾಡಯಾ ! ಲೆವಿಟ್ಟಪ್ಪ
ಡ್ರಿಲ್ಲಿಂಗಂತೆ, ವೆಲ್ಡಿಂಗಂತೆ ಒಂದೂ ಅರಿಯೆನಾ
ಗೇರಂತೆ, ಕಪ್ಲಿಂಗಂತೆ ಕಾಣೆನಯ್ಯಾ ನಾ
ಫೋರ್ ಮ್ಯಾನ್ ಮಾತು ಕೇಳಿ ಬಾಳಳಾರೆನಾ ! ಲೆವಿಟ್ಟಪ್ಪ
ಸಿವಿಲ್ ವಿದ್ಯಾರ್ಥಿ – ಕನೆಟ್ಕರಪ್ಪ ಕಾಯೋ ದೇವಾ
ಸರ್ವೆಗೆಲ್ಲಾ ಗುರುವೇ ನೀನು
ಸಬ್ಮಿಶನ್ನು ಮಾಡಲಾರೆ ಕಾಪಾಡಯಾ ! ಕನೆಟ್ಕರಪ್ಪ
ಸ್ಟ್ರಕ್ಚರಂತೆ, ಫ್ಲೂಯಿಡಂತೆ ಒಂದೂ ಅರಿಯೆನಾ
ಹೈವೇಯಂತೇ, ರೈಲ್ವೆಯಂತೆ, ಒಂದೂ ತಿಳಿಯೆನಾ
ಗ್ಲಾಸ್ ಟ್ರೇಸ್ ಮಾಡದೇ ಬದುಕಲಾರೆ ನಾ ! ಕನೆಟ್ಕರಪ್ಪ
ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿ – ಮಿಟ್ಟಾಲಪ್ಪ ಕಾಯೋ ದೇವಾ
ಪ್ರಾಬ್ಲಂಸ್‍ಗೆಲ್ಲಾ ಸ್ವಾಮಿ ದೇವಾ
ಪರೀಕ್ಷೆಲಿ ಮಾರ್ಕ್ಸ್ ಕೊಡ್ಸಿ ಕಾಪಾಡಯಾ ! ಮಿಟ್ಟಾಲಪ್ಪ
ಡಯೋಡಂತೆ, ಟ್ರಯೋಡಂತೆ ಒಂದೂ ಅರಿಯೆನಾ
ಟ್ರಾನ್ಸಿಸ್ಟರಂತೆ, ಸರ್ಕ್ಯುಟ್ಸ್‍ಂತೆ, ಒಂದೂ ತಿಳಿಯೆನಾ
ಕ್ಲಾಸಲ್ಲಂತೂ ಅರ್ಥವಾಗ್ದು ಕಾಪಾಡಯಾ ! ಮಿಟ್ಟಾಲಪ್ಪ
ಎಲೆಕ್ಟ್ರಿಕಲ್             ಶರ್ಮಪ್ಪ ಕಾಯೋ ದೇವಾ
ಸಿವಿಲ್                  ಎಲ್ಲಾ ಬ್ರಾಂಚು ಒಡೆಯ ನೀನು
ಮೆಕ್ಯಾನಿಕಲ್          ಪ್ರಾಬ್ಲಂಸ್ ಮಾಡಲಾರೆ ಕಾಪಾಡಯಾ ! ಶರ್ಮಪ್ಪ
ಎಲೆಕ್ಟ್ರಾನಿಕ್ಸ್          ಇಂಟಿಗ್ರೇಷನ್, ಡಿಫರೆಂಶಿಯೇಷನ್ ಒಂದೂ ಅರಿಯೆನಾ
ವಿದ್ಯಾರ್ಥಿಗಳು–      ಸ್ಟಾಟೀಕ್ಸು, ಡೈನಮಿಕ್ಸ್, ಒಂದೂ ತಿಳಿಯೆನಾ
ಅರ್ಡಿನೆನ್ಸು ಇಲ್ದೆ ಹೋದ್ರೆ ಬಿ.ಇ. ಮಾಡಲಾರೆ ನಾ ! ಶರ್ಮಪ್ಪ

 

ಬಿ.ಸುಧಕರ ಶಣೈ
ನಾಲ್ಕನೆಯ ವರ್ಷ ವಿದ್ಯುತ್ ವಿಭಾಗ
(೧೯೬೯ ರ್ ಕಾಲೇಜು ಸಂಚಿಕೆಯಿಂದ)