ಸಂಪದದ ಹತ್ತನೆಯ ವಾರ್ಷಿಕೋತ್ಸವಕ್ಕೆ ಅವಲೋಕನದಿಂದ ಆಯ್ದ – ವಿಶೇಷ ಸಂದರ್ಶನಗಳು – ರಮೇಶ್ ಅರವಿಂದ್ ಅವರ ನೆನಪಿನಂಗಳದಿಂದ – 1987 ಬ್ಯಾಚ್

ದಿನಾಂಕ ೧೦/೦೭/೨೦೧೭, ಹುಡುಗರಿಗೆ ಆಗಷ್ಟೇ ಮುಖ್ಯ ಪರೀಕ್ಷೆ ಮುಗಿದು , ಪ್ರಯೋಗಾಲಯದ ಪರೀಕ್ಷೆಗಳು ಶುರುವಾಗಿದ್ದವು, ಹಾಗು ಅಂದು ಶನಿವಾರವಾಗಿದ್ದ ಕಾರಣ ಹುಡುಗರು ಹೆಚ್ಚಾಗಿ ಕಾಣುತ್ತಿರಲಿಲ್ಲ. ಯಾಕೋ ಏನೋ ಎಲ್ಲರೂ ಮೆಕ್ಯಾನಿಕಲ್ ಬ್ಲಾಕ್ ಕಡೆ ಓಡಿಹೊಗುತ್ತಿದ್ದದ್ದು ಕಂಡುಬಂತು. ರಮೇಶ್ ಬಂದ್ದಿದಾರಂತೆ ಅನ್ನೋ ಮಾತು; ಯಾವ್ ರಮೇಶ್ ? ಅದೇ Weekend with ರಮೇಶ್ ಅಂತ ಕೇಳಿದೊಡನೆ ಮತ್ತೊಬ್ಬರ ಓಟ ಶುರು. ಎಲ್ಲರನ್ನು ನಗುಮುಖದಿಂದಲೇ ಮಾತನಾಡಿಸುತ್ತ , ಉತ್ಸಾಹದಿಂದ photo ತಗೆಸಿಕೊಳ್ಳುತ್ತಿದ್ದ, ಸ್ಪುರದ್ರೂಪಿ ರಮೇಶರ ದರ್ಶನವಾಯಿತು. Campus ಮೂರು ಸುತ್ತು ಹಾಕಿ canteenನಲ್ಲಿ ಬಿಸಿ ಕಾಫೀ ಹೀರುತ್ತಿರುವಾಗ. ‘ಸರ್ ನಿಮ್ಮ ಸಂದರ್ಶನ ಮಾಡಬೇಕಿತ್ತು’ ಎಂದು ಕೇಳಿದೆವು, ಎರಡು ಯೋಚನೆ ಮಾಡದೆ ಅವರು ಬಹಳ ಖುಷಿ ಪಟ್ಟು ತನ್ನೊಟ್ಟಿಗೆ ತಮ್ಮ ಸ್ನೇಹಿತರನ್ನು ಕರೆದುಕೊಂಡು boardroomನಲ್ಲಿ ಸಂದರ್ಶನಕ್ಕೆ ಬಂದು ಕುಳಿತರು. ಆಗ ನಾವು ಅನುಭವಿಸಿದ ಸಂದರ್ಶನದ, some ದರ್ಶನ ಹೀಗಿದೆ………..

ಸಂ: ಬಹಳ ದಿನಗಳ ನಂತರ ನಿಮ್ಮ ಕಾಲೇಜಿಗೆ ಬಂದಿದ್ದೀರಿ, ನೀವು ಬಂದಮೇಲೊಂತು ನಮ್ಮಲ್ಲಿನ ಉತ್ಸಾಹ ಇಮ್ಮಡಿಯಾಗಿದೆ. ಇಂದಿನ ಭೇಟಿಯ ಅನುಭವ ಹೇಗಿತ್ತು ?

ನಾನು ಈ ಮೆಕ್ಯಾನಿಕಲ್ department ಇರೊ roadಗೆ ಬಂದು ಹತ್ತಿರ-ಹತ್ತಿರ ಮೂವತ್ತು ವರ್ಷಗಳಾಗಿದೆ. ಇಂದು ಬೆಳಿಗ್ಗೆ gate ಎಲ್ಲಿದೆ ಅನ್ನೋದೇ ಗೊತಾಗ್ಲಿಲ್ಲ ಮತ್ತೆ ಒಂದು U-Turn ಹಾಕಿ campus ಒಳಗೆ entry ಕೊಟ್ಟೆ . ಒಳಗ್ ಹೋದತಕ್ಷಣ ಆಶ್ಚರ್ಯ ಆಯ್ತು, ನಾನು ಬಿಟ್ಟಾಗ ಹೇಗಿತ್ತೋ ಇನ್ನೂ ಅದೇ ರೀತಿ ಇದೆ ಕಣ್ರೀ ಈ ಸಂಸ್ಥೆ. ಆ Foundry, ಆ machine shop, ನಾವು ಕೂತು ಓದ್ತಿದ್ದ ಆ ಬೆಂಚು ಒಂಚೂರು ಬದಲಾಗಿಲ್ಲ. ಆ ಮರಗಳೊಂತು ಬಹಳ beautiful ಆಗಿ ಕಾಣ್ತಿದೆ. Campus ಸುತ್ತ ಒಂದು canopy form ಆಗಿದೆ . Literally entire college has a roof of leaves. ಯಾವೊಂದು ಶಿಕ್ಷಣ ಸಂಸ್ಥೆಯಲ್ಲೂ ಈ ರೀತಿ ಇದಿದ್ದನ್ನು ನಾನೊಂತು ನೋಡಿಲ್ಲ, that too in the center of the city ಇಂತಹ ಒಂದು ವಾತವರಣದಲ್ಲಿ ಓದೋದೇ ಒಂದು ಅದ್ಬುತ . ಆದರೆ ನಾವಿದ್ದಾಗ ಹೇಗಿತ್ತೋ ಈಗಲು facilities ಹಾಗೆ ಇವೆಯೇನೋ ಅನ್ನಿಸ್ತಿದೆ . ಆದರೆ ಇವತ್ತು ನನ್ನ memories ವಾಪಸ್ ಬಂತು, ನಾವು ಕಾಲಕಳೆದ ಅದೇ drawing hall, ಆ drawing board, ಅಲ್ಲಿದ್ದ ಪ್ರಶ್ನೆಗಳಿಗೆಲ್ಲ ಈಗಲಾದರು ಉತ್ತರಿಸಬಹುದ ಅನ್ನೋ ತುಂಟ ಮಾತು, ಇವೆಲ್ಲದರ ಜೊತೆ what surprised me was ಮೂವತ್ತು ವರ್ಷಗಳ ಹಿಂದೆ ನಾವು ಹೇಗೆ ಖಾಖಿ ಬಟ್ಟೆ ತೊಟ್ಟು prepare ಆಗ್ತಿದ್ವೋ ಇವತ್ತು ಹಾಗೆ ಇನ್ನೊಂದು ಬ್ಯಾಚ್ prepare ಆಗ್ತಿದೆ, ಕಾಲ ಬದಲಾದ್ರು UVCE ಬದಲಾಗಿಲ್ಲ. ಮತ್ತೊಂದ್ ವಿಷ್ಯ ನನಗೆ surprise ಅನ್ನಿಸಿದ್ದು ಅಂದ್ರೆ , ಆಗ ಕ್ಯಾಂಟೀನ್ ನಲ್ಲಿ ಜಗದೀಶ್ ಅಂತ ಇದ್ರು , ಬಹಳಾ ಚೆನ್ನಾಗಿ ಬಿಸಿಬೇಳೆಬಾತ್ ಮಾಡ್ತಿದ್ರು , we used to love his tea and coffee, ಆ ವ್ಯಕ್ತಿ ಇನ್ನೂ ಅಲ್ಲಿ ಕೆಲಸ ಮಾಡ್ತಿದ್ದಾರೆ. ನಾವು ಬರ್ತಿರೋದನ್ನ ತಿಳಿದು ಅಡಿಗೆಯೆಲ್ಲ ಮಾಡಿಸಿ chips ತರ್ಸಿದ್ದಾರೆ. UVCEಲಿ everything is in the same place, ರೀ noticeboardಕೂಡ ಹಾಗೆ ಇದೆ. ಆ ಕಾಲದ ವೈಭವವನ್ನು ಬಹಳ ಅಚ್ಚುಕಟ್ಟಾಗಿ ಕಾಪಾಡಿಕೊಂಡು ಬಂದಿದೆ, ಆ ಒಂದು heritage preserve ಮಾಡಿರೋದು its a fabulous thing, ಆದ್ರೆ ಈಗಿನ ಕಾಲದ ಅವಶ್ಯಕತೆಗಳಿಗೆ ತೂಕ ಮಾಡಿ ನೋಡಿದಾಗ ಇಲ್ಲಿಗೆ ಬೇಕಾಗಿರುವುದು ಬಹಳಷ್ಟು ಇದೆ.

ಸಂ: ಈ ದೈತ್ಯ ಸಂಸ್ಥೆ ಹಲವಾರು ದಿಗ್ಗಜರನ್ನ ನಮ್ಮ ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ, ಆ ಸಾಲಿನಲ್ಲಿ ನೀವು ಒಬ್ಬರು. ಹಾಗೆಯೆ ನಿಮ್ಮ ಸಿನಿ ಪಯಣ ಇಲ್ಲಿಂದಲೇ ಶುರುವಾಯಿತೆಂದು ವೀಕೆಂಡ್ ಟೆಂಟ್ ನಲ್ಲಿ ಹೇಳಿದ್ರಿ, ಅದರಬಗ್ಗೆ ಸ್ವಲ್ಪ ತಿಳ್ಕೋಬಹುದ ?

ನಾವು ಈಗ ತಾನೆ ಮಿಂಚು ಮುಂದೆ ಕೂತು family photo ತಗೆಸಿಕೊಂಡ ಜಾಗ ಇದ್ಯಲ್ಲ ಅದೇ ಜಾಗದಿಂದ ನನ್ನ ಜರ್ನಿ ಶುರು ಆಗಿದ್ದು . ನನ್ನ ನೂರೈವತ್ತು ಸಿನೆಮಾದ ಮೊದಲ ವೇದಿಕೆ ಅದು. ಅಲ್ಲಿ ನಾವು Superstar ಅನ್ನೋ ಒಂದು ನಾಟಕ ಮಾಡಿದ್ವಿ, ಆ ನಾಟಕ ಬಹಳ famous ಆಯ್ತು, ಅದೇ ನಾಟಕದಿಂದ ನನಗೆ ಒಳೊಳ್ಳೆ offersಗಳು ಬರೋಕೆ ಶುರುವಾಯ್ತು. ಆಗ ನನಗಿಂತ ಹಿರಿಯ ತರಗತಿಯಲ್ಲಿದ್ದ ಸ್ನೇಹಿತರು , ನಿರ್ದೇಶನ ಮಾಡೋಕೆ , ಸಂಭಾಷಣೆ ಬರೆಯೋಕೆ ಅವಕಾಶ ಮಾಡಿ ಕೊಟ್ಟರು . ಆಗಾಗ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡ್ತಾ, ನಮ್ ಪಕ್ಕ ಕೂತು canteenನಲ್ಲಿ ಹರಟೆ ಹೊಡೀತಿದ್ದ ಎಷ್ಟೋ ಹುಡುಗರು ಇಂದು ಅತ್ಯುನ್ನತ ಸ್ಥಾನದಲ್ಲಿದ್ದಾರೆ , ಎಷ್ಟೋ ಮಂದಿ ತನ್ನದೇ ಸ್ವಂತ ಉದ್ಯಮಗಳನ್ನು ಸ್ಥಾಪಿಸಿದ್ದಾರೆ, ನಾನು ಬಹಳ ರೋಚಕ ಹಾದಿ ತುಳಿದು ಇವತ್ತು ಸಿನಿಮ ತಾರೆ ಆಗಿ ನಿಮ್ಮ ಮುಂದಿದ್ದೀನಿ. ಒಂದು ದಿನ ಇಲ್ಲೇ ಸರೋವರ್ hotelನಲ್ಲಿ screentest ನಡೀತಿದೆ ಅಂತ ಗೊತ್ತಾಯ್ತು, ನಾನಿನ್ನು ಮೊದಲನೆ ವರ್ಷದ ವಿಧ್ಯಾರ್ಥಿ. ನೇರವಾಗಿ ಕಾಲೇಜ್ ಇಂದ hotelಗೆ ಹೋದೆ, screentestನಲ್ಲಿ ಭಾಗವಹಿಸಿದೆ. ತುಂಬಾ young ಆಗಿದ್ದೀನಿ ಅನ್ನೋ ಕಾರಣಕ್ಕೆ ನನಗಂದು ಅವಕಾಶ ಸಿಕ್ಕಿರ್ಲಿಲ್ಲ. ಅವಿನಾಶ್ , ದೇವರಾಜ್ ಕೂಡ ಅವತ್ತಿನ screentestನಲ್ಲಿದ್ರು. ಆದರೆ ನಾನು ಸುಂದರ ಸ್ವಪ್ನ ಮಾಡಿದಾಗ ಇನ್ನೂ ಇದೇ ಕಾಲೇಜ್ ನಲ್ಲೆ ಓದ್ತಿದ್ದೆ. ಇಲ್ಲಿ ಓದುತ್ತಿರುವಾಗಲೇ ಮೂರು films ರಿಲೀಸ್ ಆಗೋಯ್ತು. ನನಗಿನ್ನೂ ನೆನಪಿದೆ ನನ್ನ ಮೊದಲನೇ ಸಿನಿಮಾ ರಿಲೀಸ್ ಆದಾಗ ಗೆಳೆಯರೆಲ್ಲ ಸೇರಿ ನನ್ನನ್ನು ಹೆಗೆಲ ಮೇಲೆ ಕೂರಿಸಿ ಮೆರವಣಿಗೆ ಮೂಲಕ ಕಾವೇರಿ ಚಿತ್ರಮಂದಿರಕ್ಕೆ ಕರ್ಕೊಂಡ್ ಹೋಗಿದ್ರು.

ಸಂ: UVCE ಎಂದರೆ ಅಲ್ಲಿ ಅವಕಾಶಗಳ ಸುರಿಮಳೆಯೇ ಹೆಚ್ಚು, ಇಂತಹ ಸಂದರ್ಭದಲ್ಲಿ ಓರ್ವ ಸ್ವಾವಲಂಬಿ ವಿಧ್ಯಾರ್ಥಿ ಹೇಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು?

ಯಾರೋ ಒಬ್ಬರು ಹಾರ್ವರ್ಡ್ ನಲ್ಲಿ ತನ್ನ ವ್ಯಾಸಂಗ ಮಾಡಿರಬಹುದು, ಮತ್ತೊಬ್ಬರು ನಮ್ಮ ಸಂಸ್ಥೆಯಲ್ಲೇ ಓದಿರಬಹುದು . ಹಾರ್ವರ್ಡ್ ಇಂದ ಬಂದ ಮಾತ್ರಕ್ಕೆ ಜೀವನ ಬದಲಾಗುವುದಿಲ್ಲ. ಹಾಗಂತ ನಾವು ಬಂದಿರುವ ಸಂಸ್ಥೆ, ಅಲ್ಲಿನ ಶಿಕ್ಷಕರು, ಸ್ನೇಹಿತರನ್ನು ಕಡೆಗಣಿಸುವಂತಿಲ್ಲ . ನಮ್ಮ ಏಳಿಗೆಗೆ ಅಥವ ಸೋಲಿಗೆ ನಾವೆ ಕಾರಣಕರ್ತರು.

ಅದರೆ ನಮ್ಮನ್ನು ಹುರಿದುಂಬಿಸಲು, ತಿದ್ದಿಲು , ಬುದ್ದಿವಾದ ಹೇಳುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ . ಪುಸ್ತಕಗಳು ಕೂಡ ನಮ್ಮನ್ನು ಸ್ವ-ವಿಮರ್ಶಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರಿಂದ ಒಂದು ಸಂಸ್ಥೆಯಲ್ಲಿನ ಶಿಕ್ಷಕರು , ಅಲ್ಲಿರುವ ಪುಸ್ತಕಗಳು ಹಾಗೂ ವಿಧ್ಯಾರ್ಥಿಗಳು ಮಹತ್ವವನ್ನು ಪಡೆಯುತ್ತಾರೆ.

ಇವೆಲ್ಲದಕ್ಕೂ ಮಿಗಿಲಾಗಿ ನಿಲ್ಲುವಂಥದ್ದು ವ್ಯಕ್ತಿತ್ವ. ಓರ್ವ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಬಲಪಡಿಸಿಕೊಳ್ಳುತ್ತಾ ಸಾಗಬೇಕು, ಅವನ ಸಂಸ್ಥೆ ಹಾಗೂ ಅಲ್ಲಿಯ ವಾತಾವರಣ ಈ ವಿಕಸನಕ್ಕೆ ಶಕ್ತಿ ತುಂಬಿ ಪ್ರೋತ್ಸಾಹಿಸಬೇಕು. ಸಂಸ್ಥೆ ನಮ್ಮನ್ನು ಗುರುತಿಸುವಂತೆ ಮಾಡಬೇಕು, ಆಗಲೇ ಸಾಮಾನ್ಯ ಮನುಷ್ಯ ಸಾಧಕನಾಗುವುದು. ಬಹುಷಃ ಇದೇ ಎಲ್ಲಾ ಸಂಸ್ಥೆಗಳ ಮುಖ್ಯ ಉದ್ದೇಶ.

ಸಂ: ನಮ್ಮ UVCE ನೂರು ವರ್ಷದ ಗಡಿಯನ್ನು ಮುಟ್ಟಿದ ಕರ್ನಾಟಕದ ಮೊದಲ ತಾಂತ್ರಿಕ ಸಂಸ್ಥೆ , ಈ ಒಂದು ಸುಸಂಧರ್ಭದ ಬಗ್ಗೆ ನಿಮ್ಮ ಅನಿಸಿಕೆ ಏನು ?

ಯಾವೊಂದು ರಂಗದಲ್ಲಾಗಲಿ ಸಮತೊಲನತೆಯನ್ನು ಕಾಪಾಡಿಕೊಳ್ಳುವುದು ಹೆಚ್ಚು ಶ್ರಮವನ್ನು ಬೇಡುವಂಥ ವಿಚಾರ . ಒಬ್ಬ ನಟ ೩ ಗಂಟೆಗಳ ಕಾಲ ನಾಯಕನಾಗಿರಬಹುದು , ೩ ದಿನಗಳ ಕಾಲ ನಾಯಕನಾಗಿರಬಹುದು , ೩ ವರ್ಷಗಳ ಕಾಲ ನಾಯಕನಾಗಿರಬಹುದು, ಆದರೆ ಸತತವಾಗಿ ಆ ಲಯ ಕಾಪಾಡಿಕೊಳ್ಳುವುದು ಕಷ್ಟಸಾಧ್ಯ. ಆದರೆ ನಮ್ಮ ಸಂಸ್ಥೆ ಯಶಸ್ವಿಯಾಗಿ ೧೦೦ ವರ್ಷಗಳ ಕಾಲ ವಿದ್ಯಾದಾನ ಮಾಡುತ್ತಾ ಬಂದಿದೆ , ಲಕ್ಷಗಟ್ಟಲೆ ಜನರ ಬದುಕನ್ನು ಉತಮ್ಮ ರೀತಿಯಲ್ಲಿ ಬದಲಾಯಿಸಿದೆ, ಬದಲಾಯಿಸುತ್ತಿದೆ. ನಮಗೆ ಪರಂಪರೆಯ ಅಮೋಘ ಜೀವಾಳವಿದೆ, ಅದನ್ನು ಬಳಸಿ ಇನ್ನೂ ಉತ್ತುಂಗಕ್ಕೆ ಏರುವ ಪ್ರಯತ್ನ ಮಾಡಬೇಕು. ಪ್ರಯತ್ನ ಮಾಡಿದ್ದಾರೆ, ಅದರ ಅವಶ್ಯಕತೆ ಇನ್ನೂ ಬೇಕಿದೆ. ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸುವುದು ತುಂಬಾ ಕಷ್ಟ ಅಂಥದ್ರಲ್ಲಿ ೧೦೦ವರ್ಷ ತನ್ನ ಹೆಸರನ್ನು ಉಳಿಸಿಕೊಂಡು ಬಂದಿದೆ ಅಂದ್ರೆ ಅದರ ಗುಣಮಟ್ಟತೆ ತೋರುತ್ತದೆ.

ಸಂ: UVCEಯ ಮುಂದಿನ ನೂರುವರ್ಷಗಳನ್ನು ಕಲ್ಪಿಸಿಕೊಳ್ಳುವುದಾದರೆ ಹೇಗಿರಬಹುದು ?

ನಮ್ಮ ಸಂಸ್ಥೆಗೆ ಇರುವ ಇತಿಹಾಸ ಹಾಗೂ ಒಳ್ಳೆಯ ಹೆಸರು ನಮಗೆ ವರವಿದ್ದಂತೆ , ಇವನ್ನು ಬಳಸಿಕೊಂಡು ಸಮಯಕ್ಕೆ ತಕ್ಕ ಹೆಜ್ಜೆ ಇಟ್ಟರಷ್ಟೆ ಸಾಕು ಅನ್ನಿಸುತ್ತೆ. ಈಗಿನ ಸ್ಥಿತಿಯಲ್ಲಿರುವ labs ನೋಡಿದ್ರೆ ನನಗೆ ನಿಜವಾಗಲು ಬೇಜಾರ್ ಆಗುತ್ತೆ , I feel depressed . ಅಯ್ಯೋ…! ಇಲ್ಲಿ ಎಷ್ಟು ಬದಲಾವಣೆಗಳನ್ನು ತರುವ ಸಾಧ್ಯತೆ ಇದೆ ಆದ್ರೆ ಅದನ್ನ ನಿರ್ಲಕ್ಷಿಸಲಾಗ್ತಿದ್ಯೆನೋ !? ಇಲ್ಲಿ ಬಹಳಷ್ಟು ಶಿವ ಶಕ್ತಿ ಅಡಗಿದೆ , the possibility and the potential over here is very much high. ಆದ್ದರಿಂದ ಮುಂದಿನ ನೂರು ವರ್ಷಗಳನ್ನು ಕಲ್ಪಿಸಿಕೊಳ್ಳಲು ಬಹಳ ಕಷ್ಟ, ಕಾಲವೊಂತು ಈನಡುವೆ ಬಹಳ ಬೇಗ ಬದಲಾಗ್ತಿದೆ. ನಾಳೆ ಕಲ್ಪಿಸಿಕೊಳ್ಳುವುದಕ್ಕಿಂತ ಇಂದು ಏನಾದರು ಮಾಡುವುದು ಬಹಳ ಮುಖ್ಯ. ಕಳೆದ ಹತ್ತುವರ್ಷಗಳಲ್ಲಿ ಏನು ಮಾಡಿರಲಿಲ್ಲವೋ ಅದು ಇವತ್ತು ಕಣ್ಮುಂದಿದೆ , ನಾವು ಇಂದು ಏನನ್ನು ಮಾಡುತ್ತೀವೋ ಅದು ನಮ್ಮ ಮುಂದಿನ ಹತ್ತು ವರ್ಷಗಳನ್ನು ತೋರಿಸುತ್ತದೆ . ಆದರಿಂದ ಇನ್ನು ನೂರು ವರ್ಷದ ಕಲ್ಪನೆ ಬಿಟ್ಟು ಇರುವ ವರ್ಷದಲ್ಲಿ ಕೆಲಸ ಮಾಡೋನ.

ಸಂ: ಈ ಸಂಸ್ಥೆಗೆ ಹಳೇಯ ವಿಧ್ಯಾರ್ಥಿಗಳು ಹೇಗೆ ಸಹಾಯ ಮಾಡಬಹುದು ?

ಯಾವುದೇ ಒಂದು ವಿದ್ಯಾ ಸಂಸ್ಥೆಯಾಗಲಿ ಅದರ ಸಹಾಯಕ್ಕೆ ಮೊದಲು ಬರುವುದೇ ಅಲ್ಲಿಯ ಹಳೇಯ ವಿಧ್ಯಾರ್ಥಿಗಳು. ಹಣಕಾಸಿನ ಸಹಾಯ ಮಾಡುವುದಾದರೆ ಅದನ್ನು ನಿರ್ವಹಿಸುವ ಪಾರದರ್ಶಕ ವ್ಯವಸ್ಥೆ ಜಾರಿ ಮಾಡಬೇಕು. ಯಾವುದಕ್ಕೆ ಯಾಕೆ, ಹೇಗೆ, ಎಷ್ಟು, ಖರ್ಚು ಎಂಬುದನು ಲೋಪದೊಷವಿಲ್ಲದೆ ನಿರ್ವಹಿಸುವ ನಂಬಿಕೆಗರ್ಹ ತಂಡ ಕಾರ್ಯ ಮಾಡಬೇಕು. ಕೇವಲ ಹಣವಲ್ಲದೆ ಇನ್ನೂ ಸಾಕಷ್ಟು ಮಾರ್ಗಗಳ ಮೂಲಕ ಒಬ್ಬರು ತಮ್ಮ ಸೇವೆ ಸಲ್ಲಿಸಬಹುದು. ಮುಖ್ಯವಾಗಿ ಶಿಕ್ಷಣವನ್ನು ನೀಡುವ ಮೂಲಕ . ನಮ್ಮಲ್ಲಿ ಎಷ್ಟೋ ಜನರು ಅಮೋಘ ಸಾಧನೆಯನ್ನು ಮಾಡಿದ್ದಾರೆ ಅಂಥವರು ತಮ್ಮ ಜೀವನಾನುಭವವನ್ನು ಹಂಚಿಕೊಂಡರೆ ಬಹಳಷ್ಟು ಉಪಯೋಗವಾಗುತ್ತದೆ. ಅವರೆಲ್ಲರೂ ಇಲ್ಲಿಗೇ ಬಂದು ಅನುಭವವನ್ನು ಹಂಚಿಕೊಳ್ಳಬೇಕು ಅನ್ನುವ ಪ್ರಮೇಯವೇ ಇಲ್ಲ. Skype ಇಲ್ಲ ತಂತ್ರಜ್ಞಾನ ಬಳಸಿಯೂ ತಮ್ಮಲ್ಲಿರುವ ಅಮೂಲ್ಯ ಜ್ಞಾನವನ್ನು ಮುಂದಿನವರಿಗೆ ಧಾರೆ ಎರೆಯಬಹುದು. ಪ್ರಿತಿಯೊಬ್ಬರ ಬದುಕಿನಲ್ಲಿ ಕಲಿಯಲು ಒಂದಲ್ಲೊಂದು ವಿಷಯ ಇದ್ದೇಇರುತ್ತದೆ , ಅವರು ಮಾಡಿದ ತಪ್ಪುಗಳು, ಒಪ್ಪುಗಳು, ಅವರು ತಗೆದುಕೊಂಡ ಹಾದಿ ಇವೆಲ್ಲ ಜೀವನವನ್ನು ಕಲಿಸುತ್ತದೆ. ಜೀವನವನ್ನು ಹತ್ತಿರದಿಂದ ತೋರುವ ಸಂಸ್ಥೆ ನಮ್ಮದಾಗುತ್ತದೆ.

ಸಂ: ನಿಮ್ಮ R360 ಇದೇ ರೀತಿಯ ಕಾರ್ಯಕ್ರಮವೇ ? ಇದನ್ನು UVCEವರೆಗೂ ವಿಸ್ಥರಿಸಬಹುದೇ ?

R360 ಅನ್ನೋದು ಎಲ್ಲಿ ಬೇಕಾದ್ರೂ implement ಮಾಡಬಹುದು, ಸದ್ಯಕ್ಕೆ high school ಮಕ್ಕಳಿಗೆ ಮಾತ್ರ ನಡೆಯುತ್ತಿದೆ . R360ಮೂಲಕ ನಾನು ವಿಧ್ಯಾರ್ಥಿಗಳಲ್ಲಿ ಹೇಳೋಕ್ ಇಷ್ಟಪಡುವುದೇನೆಂದರೆ, classಗೆ ೧st ಬರೋದೆ ಮುಖ್ಯವಲ್ಲ, ಪುಸ್ತಕದಲ್ಲಿರುವುದಷ್ಟೇ ಜ್ಞಾನವಲ್ಲ. ಪುಸ್ತಕದ ಹೊರತಾಗಿಯೂ ವಿಶಾಲವಾದ ಪ್ರಪಂಚವಿದೆ. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಉನ್ನತಿ ಪಡೆಯುವುದು ಜ್ಞಾನ.

ಆಟ, ಪಾಠ, ನೃತ್ಯ , ಸಂಗೀತ, ಇವೆಲ್ಲವೂ ಕಲೆಯೇ , ನಿಮಗ್ಯಾವುದರಲ್ಲಿ ಹೆಚ್ಚು ಒಲವಿದೆಯೋ ಅದರಲ್ಲಿ ಸಾಧನೆ ಮಾಡುವುದು, ಆ ಕಲೆಯನ್ನು ಒಲಿಸಿಕೊಳ್ಳುವುದು ಬಹಳ ಸುಲಭ. ಒಂದು ವೇಳೆ ಬೇರ್ಯಾವುದರಲ್ಲೋ ನಿಮ್ಮ ಆಸಕ್ತಿ ಇದ್ದು ಮತ್ತೊಂದರಲ್ಲಿ ಉನ್ನತಿ ಸಾಧಿಸಿದರೆ ನಿಮ್ಮ ಅಂತರಂಗದಲ್ಲಿ ತಳಮಳ ಇದ್ದೇಇರುತ್ತದೆ , ಜೀವನದ ಸಂಪೂರ್ಣತೆಯನ್ನು ಆಸ್ವಾದಿಸಲು ಅದು ಅಡ್ಡಿಯಾಗುತ್ತದೆ. ಆದ್ದರಿಂದ ನಿಮಗಿಷ್ಟವಿರೋ ದಾರಿಯನ್ನು ಆಯ್ಕೆ ಮಾಡಿ ಮುನ್ನುಗ್ಗಿ ಅಂತ ಸಂದೇಶ ಸಾರುತ್ತಿದೀನಿ . Everyone is unique, ಪ್ರತಿಯೊಬ್ಬರು ತಮ್ಮದೇ ಆದ ವ್ಯಕ್ತಿತ್ವವನು ಹೊಂದಿರುತ್ತಾರೆ ಇದನ್ನು, ಬೆಳೆಸಿಕೊಳ್ಳುವ “I am special”, ಎಂಬ ಭಾವನೆ ಮೂಡಿಸುವನಿಟ್ಟಿನಲ್ಲಿ ಪ್ರಯತ್ನಿಸುತ್ತೀನಿ.

– ರಮೇಶ್ ಅರವಿಂದ್, ಅವಲೋಕನ

Download Avalokana View All Sampada Editions  Feedback/Comments